Index   ವಚನ - 13    Search  
 
ಅಡವಿಯಲ್ಲಿ ಕಣ್ಣುಗೆಟ್ಟ ಪಶುವಿನಂತೆ, ನಾನು ಪ್ರಳಾಪಿಸುತ್ತಿದ್ದೆನಯ್ಯಾ. ಕಡುದುಃಖದಿಂದ ಮರುಗಲು, ಶರಣ ಚೆನ್ನಣ್ಣನರಿದು ಶಿವಶಿವಾ ಎಂಬ ಮಂತ್ರವನರುಹಿ ಅಳಲುವ ಬಳಲಿಕೆಯ ಕಳೆದನಯ್ಯಾ. ಸಂಗಯ್ಯನಲ್ಲಿ ಚೆನ್ನಬಸವಣ್ಣಂಗೆ, ನಮೋ ನಮೋ ಎನುತಿದ್ದೆನು.