Index   ವಚನ - 50    Search  
 
ಆರಾಧ್ಯರಿಲ್ಲದಂದು ಹುಟ್ಟಿದ ಗಂಡನೆನ್ನ ಗಂಡ; ಹಿರಿಯರಿಲ್ಲದಂದು ಹುಟ್ಟಿದ ಗಂಡನಾತ ನಮ್ಮಯ್ಯ. ಮಾನುಷರಿಲ್ಲದುದನರಿದು ಆ ಮಾನುಷರ ಇರವೆ ಪ್ರಸಾದವಾಯಿತ್ತು. ಆ ಪ್ರಸಾದವ ತಿಳಿಯದ ಮುನ್ನ, ಹೆಣ್ಣುತನದ ರೂಪಳಿಯಿತ್ತೆನಗೆ. ಆ ಹೆಣ್ಣುತನದ ರೂಪನಳಿದು ನಿರೂಪಿಯಾದೆನಯ್ಯ ಸಂಗಯ್ಯ.