Index   ವಚನ - 71    Search  
 
ಎನಗಿನ್ನಾರು ಗತಿಯಿಲ್ಲವಯ್ಯ. ಎನಗಿನ್ನಾರು ಪ್ರತಿಯಿಲ್ಲವಯ್ಯ. ಎನ್ನಯ್ಯನ ಪ್ರಾಣವೇ ನಾನಾದ ಕಾರಣ, ಎನಗಿನ್ನಾರು ಸರಿಯ ಕಾಣೆನಯ್ಯ. ಎನಗೆ ಮುಖವನರಿಯದಿರಲು, ಮುಖಸ್ವರೂಪಿಯಾದೆನಯ್ಯ ಸಂಗಯ್ಯ.