ಎನಗೆ ಹಾಲೂಟವನಿಕ್ಕುವ ತಾಯೆ,
ಎನಗೆ ಪರಿಣಾಮವ ತೋರುವ ತಾಯೆ,
ಪರಮಸುಖದೊಳಗಿಪ್ಪ ತಾಯೆ,
ಪರವಸ್ತುವ ನಂಬಿದ ತಾಯೆ, ಬಸವನ ಗುರುತಾಯೆ,
ಸಂಗಯ್ಯನಲ್ಲಿ ಸ್ವಯಲಿಂಗಿಯಾದೆಯಾ,
ಅಕ್ಕನಾಗಮ್ಮ ತಾಯೆ!
Art
Manuscript
Music
Courtesy:
Transliteration
Enage hālūṭavanikkuva tāye,
enage pariṇāmava tōruva tāye,
paramasukhadoḷagippa tāye,
paravastuva nambida tāye, basavana gurutāye,
saṅgayyanalli svayaliṅgiyādeyā,
akkanāgam'ma tāye!