Index   ವಚನ - 80    Search  
 
ಎನಗೆ ಹಿತಕಾರಿಗಳಾಗಿ ಇದ್ದವರೀ ಶರಣರು, ಎನಗೆ ಪ್ರಭೆದೋರಿ ಇದ್ದವರೀ ಶರಣರು, ಎನಗೆ ಸಂಗ ನಿಸ್ಸಂಗ ಕೊಟ್ಟವರೀ ಶರಣರು. ಆ ಶರಣಪಥವ ನೋಡ ಹೋದರೆ, ಆನು ನೋಡದ ಬಲವು ಬಲವೆ ಆಯಿತಯ್ಯ ಸಂಗಯ್ಯ ಸಂಗಯ್ಯ.