Index   ವಚನ - 83    Search  
 
ಎನಗೇನೆಂಬೆನೆಂಬ ಸಂದೇಹ ಹರಿಯಿತ್ತು. ಆ ಸಂದೇಹ ಹರಿದು ಅಪ್ರಮಾಣದೊಳಗೆ ಐಕ್ಯವಾದೆನಯ್ಯ ನಾನು. ಆನು ಅನುಭವ ಸುಖಿಯಾಗಿ ಆ ಸುಖ ತೃಪ್ತಿಯ ಕಂಡು ಬಯಲ ಸುಖವನುಂಡೆನಯ್ಯ ಬಸವಯ್ಯ. ಸಂಗಯ್ಯ ನಾನು ಮುಕ್ತಂಗನೆಯಾದೆನು.