Index   ವಚನ - 128    Search  
 
ಏನೆಂದೆನ್ನಬಹುದಯ್ಯ? ಎಂತೆಂದೆನ್ನಬಹುದಯ್ಯ? ಈ ಘನದ ವಿಚಾರವ ಈ ಘನದಲ್ಲಿ ಇಹಪರದ ಸುಖವ ಕಂಡು ಕೊಡುವೆನೆಂದು ಹೋದರೆ ಆ ಲಿಂಗವೆನ್ನ ಕರದೊಳಗೆ ತಾನೆಯಡಗಿತ್ತು. ನಾನಡಗಿ ನನ್ನ ವಿಚಾರವ ತಿಳಿಯಲು ನಾನು ಬದುಕಿದೆನಯ್ಯ ಸಂಗಯ್ಯ.