Index   ವಚನ - 152    Search  
 
ಗಮನದ ಸುಖವಡಿಗಿ ನಿರ್ಗಮನವಾಗಿತ್ತು ಬಸವಾ. ನಿರ್ಗಮನದ ಸುಖಸುಯಿದಾನವಾಯಿತ್ತು ಬಸವಾ, ನೋಡುವ ವಸ್ತು ಕೂಡೆ ಬಯಲಾಯಿತ್ತು ಬಸವಾ. ಎನಗಿನ್ನೇತರ ಭಕ್ತಿ ಬಸವಾ? ಎನಗಿನ್ನೇತರ ಮುಕ್ತಿ ಬಸವಾ. ಎನಗಿನ್ನು ಶಬ್ಧ ನಿಶ್ಯಬ್ದಸೂಚನೆಯಾಯಿತ್ತಯ್ಯಾ ಬಸವಾ, ಸಂಗಯ್ಯ, ಬಸವನ ಗಮನದರಿವು ಎನಗೆರಲ್ಲಿಯದು?