Index   ವಚನ - 153    Search  
 
ಜನನ ಮರಣವಳಿದು, ಜನ್ಮದೊಪ್ಪವ ಕಳೆದು, ಪ್ರಸನ್ನಮೂರ್ತಿಯ ಕಂಡು ಪ್ರಭಾಪೂರಿತ ಸ್ವರೂಪವಾಗಿ, ಮನೋವಿಲಾಸದ ಹಂಗು ಹರಿದು, ಅಂಗ ಲಿಂಗ ನಿಜವು ಮೂರ್ತಿಯಾಗಿ ಹೊಳೆಯಲು ಸಂಗ ಸಂಬಂಧ ಶಿವಾನುಕೂಲತೆಯಾಯಿತ್ತಿಂದು ಸಂಗಯ್ಯ.