Index   ವಚನ - 155    Search  
 
ಜ್ಞಾನವಿಲ್ಲದ ಕ್ರೀಯ ಮಾಡಿದಲ್ಲಿ ಫಲವೇನಯ್ಯ? ಆ ಜ್ಞಾನವು ಕ್ರೀಯನು ಸಂಬಂಧಿಸಲು ಸಂಬಂಧ ಸ್ವಯವಾಯಿತ್ತಯ್ಯ. ಅಪ್ರಮಾಣದ ಪ್ರಕಾಶವ ಕಂಡು ಅರುವನರಿದು ತಿಳಿಯಲು ಸಂಗಯ್ಯನಲ್ಲಿ ಪ್ರಸಾದಿಯಾದೆನಯ್ಯ.