Index   ವಚನ - 154    Search  
 
ಜಯ ಸುಖ ವಿಸುಖವಿಲ್ಲ. ಜಯ ವಿಜಯವಾಯಿತ್ತು. ಅಪ್ರತಿಮನ ಅರುಹ ತಿಳಿದು, ಆ ಅಪ್ರತಿಮನ ಇರವ ತಿಳಿದು, ಅಲ್ಲದ ಅನುಭಾವಕ್ಕೆ ಅಲ್ಲದ ವಿವರವ ಕಂಡು ಆನು ಬದುಕಿದೆನಯ್ಯ ಸಂಗಯ್ಯ.