Index   ವಚನ - 181    Search  
 
ನಾನಾವ ಗಮನವ ಕಂಡೆನಯ್ಯ? ನಾನಾವ ಬ್ರಹ್ಮವನರಿದೆನಯ್ಯ? ನಾನಾವ ತೃಪ್ತಿಯನರಿದೆನಯ್ಯ? ಇಷ್ಟದಂಗಸುಖವ ಕಂಡು ಸುಖಿಯಾದೆನಯ್ಯ. ಮನವಿಲ್ಲ ತನುವಿಲ್ಲ ಆಧಾರಾದಿ ಸುಖವಿಲ್ಲ ಶುದ್ಧ ನಿಃಕಲ ತತ್ವವಿಲ್ಲವಯ್ಯ. ಸಂಗಯ್ಯ, ಆತ್ಮಸುಖ ಸಂಭಾಷಣೆಯಂತಯ್ಯ ಸಂಗಯ್ಯನ ಗುರುಬಸವ.