Index   ವಚನ - 198    Search  
 
ಪ್ರಸಾದಿಗಳು ಪ್ರಸಾದಿಗಳೆಂದೆಂಬರಯ್ಯ, ತಾವು ಪ್ರಸಾದಿಗಳಾದ ಪರಿಯೆಂತಯ್ಯ? ಪರಿಪೂರ್ಣದ ನೆಲೆಯ ತಿಳಿದು ಪರಂಜ್ಯೋತಿಯ ಅನುಭವವನರಿಯದನ್ನಕ್ಕ ತಾವು ಪ್ರಸಾದಿಗಳಾದ ಪರಿಯೆಂತಯ್ಯ? ಪರಮಸುಖದ ಅನುಭವವನರಿದು ಇತರೇತರ ಮಾರ್ಗವ ಕಾಣದೆ ಬಯಲಕೂಡಿದಾತ ನಮ್ಮ ಬಸವನೆ ಪ್ರಸಾದಿಯಲ್ಲದೆ ಮತ್ತಾರಿಗೂ ಪ್ರಸಾದಿಸ್ಥಲ ಸಾಧ್ಯವಾಗದಯ್ಯ ಸಂಗಯ್ಯ.