Index   ವಚನ - 275    Search  
 
ಸಯದಾನವರತ ಬಸವಾ.ಸಂಭ್ರಮಮೂರ್ತಿ ಬಸವಾ. ಸಂಗ ನಿಸ್ಸಂಗ ಬಸವಾ, ಎಲೆ ಅಯ್ಯನ ಅಯ್ಯ ಬಸವಾ, ಏಕರೂಪ ನಿರೂಪಾದೆಯಾ ಬಸವಾ? ನಿಸ್ಸಂಗ ಎನ್ನಲ್ಲಿ ರೂಪಾಯಿತ್ತು ಬಸವಾ. ಬಸವ ಬಯಲನೆಯ್ದಿ ಆನು ಬಯಲನೆ ಕೂಡಿದೆನಯ್ಯಾ ಸಂಗಯ್ಯಾ.