Index   ವಚನ - 280    Search  
 
ಹಿರಿಯತನಕ್ಕೆ ಹೆಣ್ಣೆಂದು ಕರೆದರೆ ಆ ಹೆಣ್ಣುರೂಪಾದ ನಾಮವು ನಿರ್ನಾಮವಯ್ಯ. ಅರಿವನರಿದು ಅಪ್ರತಿಮ ಘನವ ಕಂಡುಳಿದು ಹೆಣ್ಣುತನದ ಮಾತನಳಿದು, ಏಕೋದೇವನ ಕೃಪೆಯನು ಕಂಡು ಬದುಕಿದೆನಯ್ಯ ಸಂಗಯ್ಯ.