Index   ವಚನ - 6    Search  
 
ಅವಿದ್ಯನಾಗಿ, ಅವಗುಣನಿರತನಾಗಿ ಅವಿವೇಕ ಅನಾಮಯನಾಗಿ ಅಬದ್ಧ ಅಪ್ರಮಾಣಂಗೆ ಗುರು ಲಿಂಗ ಜಂಗಮವೆಂಬ ಇದಿರೆಡೆಯಿಲ್ಲ, ಅದು ಪರಿಪೂರ್ಣಭಾವ. ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು ನಿಜವೆ ತಾನಾದ ನಿತ್ಯ.