Index   ವಚನ - 8    Search  
 
ಆಚಾರದಿಂದ ವಿಚಾರಿಸಿ ದೀಕ್ಷೆಯ ಮಾಡುವುದು ಗುರುಸ್ಥಲ. ವಿಚಾರ ಸರ್ವಗಣಾಚಾರದಿಂದ ದೀಕ್ಷೆಯ ಮಾಡುವುದು ಜಂಗಮಸ್ಥಲ. ಈ ಉಭಯದ ಗೊತ್ತ ಮುಟ್ಟಿ, ನಿಶ್ಚಯ ನಿಜವ ಮುಟ್ಟಿ ಪಂಚವಿಂಶತಿತತ್ವಂಗಳಲ್ಲಿ ಷಟ್ಕರ್ಮ ತ್ರಿವಿಧಾತ್ಮ ಭೇದಂಗಳಲ್ಲಿ ಏಕೋತ್ತರಶತಸ್ಥಲವೆಂಬ ಭಿನ್ನಭಾವಂಗಳನರಿದು ಐವತ್ತೊಂದಕ್ಷರದ ಬೀಜನೇಮವನೊಂದಕ್ಷರದಲೈಕ್ಯವನರಿತು ಇಂತೀ ಐವತ್ತೆರಡು ಗುರುಲಘು ಗಣನೇಮ ಬಿಂದು ವಿಸರ್ಗ ಶಾಖೆ ಮುಂತಾದವನೊಂದುಗೂಡಿ ನಿರುತದಿಂದ ನಿಂದುದು ಜ್ಞಾನದೀಕ್ಷೆ. ಇಂತೀ ಗುರುಸ್ಥಲದ ವಿವರ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.