Index   ವಚನ - 28    Search  
 
ಕಲ್ಲಿನಲ್ಲಿ ಹುಟ್ಟಿದ ಕಿಡಿ ಕಲ್ಲ ಸುಡಬಲ್ಲುದೆ? ಬೆಲ್ಲದಲ್ಲಿ ಹುಟ್ಟಿದ ಸಾರವ ನಿಸ್ಸಾರ ಮೆಲ್ಲಬಲ್ಲುದೆ? ಇಂತೀ ಬಲ್ಲತನವುಳ್ಳವರಲ್ಲಿಯ ವಾಚಕತ್ವ ಆಶೆಯ ಪಾಶವ ಕೊಲ್ಲಬಲ್ಲುದೆ? ಮರೆಯ ಗ್ರಾಸವ ಕೊಂಬ ಮರ್ತ್ಯನಂತೆ ಈಷಣತ್ರಯಕ್ಕೆ ಮೆಚ್ಚಿ, ಮಾತಿನ ಮಾಲೆಯ ನೀತಿಯ ಹೇಳುವ ಈ ಯಾಚಕರುಗಳಿಗೆ ಏತರ ಬೋಧೆ ? ಇದು ನಿಹಿತದ ಉಭಯಸ್ಥಲ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.