ಖದ್ಯೋತ ಕೀಟಕವ ಮುಚ್ಚಿರಿಸಿದಲ್ಲಿ
ಮತ್ತೆ ಉಂಟೆ ಆ ಕಳೆ ದಿನಪನ ಬೆಳಗಿನಲ್ಲಿ?
ಮತ್ತರಪ್ಪ ದುರ್ವಾಚಕರ ಮಾತಿನಮಾಲೆ
ಸ್ವಯ ಸ್ವಾನುಭಾವಿಕರಲ್ಲಿ ಉಂಟೆ?
ಆತ್ಮವಾದಿಯ ಮಾತು, ವೈದಿಕ ಕರ್ಮದ ಕ್ರೀ
ಸಾಧಕನ ಶರೀರಧರ್ಮ
ಈ ಗುಣ ಸದ್ಭಾವಿಯ ಸ್ವಯವ ಮುಟ್ಟದಾಗಿ.
ಇಂತೀ ಅಭೇದ್ಯವಸ್ತುವನರಿಯಬೇಕು
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.
Art
Manuscript
Music
Courtesy:
Transliteration
Khadyōta kīṭakava muccirisidalli
matte uṇṭe ā kaḷe dinapana beḷaginalli?
Mattarappa durvācakara mātinamāle
svaya svānubhāvikaralli uṇṭe?
Ātmavādiya mātu, vaidika karmada krī
sādhakana śarīradharma
ī guṇa sadbhāviya svayava muṭṭadāgi.
Intī abhēdyavastuvanariyabēku
cannabasavaṇṇapriya bhōgamallikārjunaliṅgadalli.