ಧ್ಯಾನದಿಂದ ಮನದ ಕೊನೆಯಲ್ಲಿ ವಸ್ತುವ ಕಟ್ಟಿತಂದು
ಇಷ್ಟಲಿಂಗದ ಗೊತ್ತಿನಲ್ಲಿ ಬೈಚಿಟ್ಟಿರಬೇಕೆಂಬುದು ಇದಾರ ದೃಷ್ಟವಯ್ಯಾ?
ಆ ದೃಷ್ಟಕ್ಕೆ ಆ ಮೂರ್ತಿ ಒಂದೆಂಬುದನರಿಯದೆ
ನೆನೆವುದು ನೆನೆಹಿಸಿಕೊಂಬುದು ಉಭಯವಾದಲ್ಲಿ
ಸಂದೇಹದ ಸಂದು. ಆ ಸಂದನಳಿದಲ್ಲಿ
ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು ತಾನು ತಾನೆ.
Art
Manuscript
Music
Courtesy:
Transliteration
Dhyānadinda manada koneyalli vastuva kaṭṭitandu
iṣṭaliṅgada gottinalli baiciṭṭirabēkembudu idāra dr̥ṣṭavayyā?
Ā dr̥ṣṭakke ā mūrti ondembudanariyade
nenevudu nenehisikombudu ubhayavādalli
sandēhada sandu. Ā sandanaḷidalli
cannabasavaṇṇapriya bhōgamallikārjunaliṅgavu tānu tāne.