Index   ವಚನ - 90    Search  
 
ವ್ಯತಿರಿಕ್ತವಾದ ಪರಿಪೂರ್ಣತ್ವ ಆದೆನೆಂದಲ್ಲಿ ಅಚಲಿತವಪ್ಪ ನಿಜಚಲಿತನಾಗಿ ಚಲಿಸದೆ ನಿಂದ ಪರಿಯಿನ್ನೆಂತೊ? ರತ್ನದ ಘಟಗೂಡಿ ಮುಚ್ಚಿದಡೆ ದೀಪ್ತಿ ಅಲ್ಲಿಯೆ ಅಡಗುವುದಲ್ಲದೆ ಘಟ ಬೇರಿದ್ದು ಬೆಳಗ ಮುಚ್ಚಿಹೆನೆಂದಡೆ ಅಡಗಿದುದುಂಟೆ ಆ ಬೆಳಗು? ಅದು ಕಾರಣದಲ್ಲಿ ಪರಿಪೂರ್ಣತ್ವವಾದಲ್ಲಿಯೆ ಇದಿರೆಡೆಯಿಲ್ಲ. ಅರ್ಪಿತಕ್ಕೆ ಅಗ್ನಿ ಕೊಂಡ ಘೃತ ತಿಲ ಸಾರ ಮುಂತಾದವು ರೂಪಗೊಂಡವು. ಅಲ್ಲಿಯೆ ಅಡಗಿದಂತೆ ಐಕ್ಯನ ಅರ್ಪಿತಸ್ಥಲ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.