ಬಸವಣ್ಣ   
Index   ವಚನ - 389    Search  
 
ಎಡದ ಕೈಯಲು ಹಾಲ ಬಟ್ಟಲು, ಬಲದ ಕೈಯಲ್ಲಿ ಓಜುಗಟ್ಟಿಗೆ: ಆವಾಗ ಬಂದಾನೋ, ನಮ್ಮಯ್ಯ; ಬಡಿದು ಹಾಲ ಕುಡಿಸುವ ತಂದೆ? 'ದಂಡಕ್ಷೀರದ್ವಯ ಹಸ್ತಂ ಜಂಗಮಂ ಭಕ್ತಿಮಂದಿರಂ ಅತಿಭಕ್ತಿ ಲಿಂಗಸಂತಷ್ಟಂ ಅಪಹಾಸ್ಯಂ ಯಮದಂಡನಂ ' ಎಂದುದಾಗಿ, ಕೂಡಲಸಂಗಮದೇವಯ್ಯ, ತಾನೇ, ಭಕ್ತಿಪಥವ ತೋರುವ ತಂದೆ!