ಲಿಂಗವ ಪೂಜೆಯ ಮಾಡಿ, ಜಂಗಮವ ಕಂಡುದಾಸೀನವ ಮಾಡಿದರೆ,
ಆ ಲಿಂಗಪೂಜಕರಿಗೆ ಮಾಡಿದ ಶಿವದೂತರ ದಂಡವೆಂಬುದು!
ಲೋಕದ ಕರ್ಮಿಗಳಿಗೆ ಮಾಡಿದ ಯಮದೂತರ ದಂಡವೆಂಬುದು!
ಇದು ಕಾರಣ, ಲಿಂಗ ಜಂಗಮವನೊಂದೆಂದರಿಯದವರ
ಎನಗೆ ತೋರದಿರಯ್ಯಾ, ಕೂಡಲಸಂಗಮದೇವಾ.
Hindi Translationलिंगपूजा कर जंगम की उपेक्षा करें,
तो ऐसे लिंग-पूजकों को शिवदूतों दंड देंगे
लोक-कर्मियों को यमदूतों दंड देंगे
अतः कूडलसंगमदेव, लिंग और जंगम को
एक नहीं माननेवालों को मुझे मत दिखाओ॥
Translated by: Banakara K Gowdappa
English Translation If, worshipping the Liṅga upon the sight
Of Jaṅgama you turn your back to him,
Such Liṅga worshipper shall have
Chastisement from the Śiva messengers!
The addicts of this world shall have
Chastisement from Yama's messengers!
Therefore O Kūḍala Saṅgama Lord,
Let me not see
Such men as do not recognise
Liṅga and Jaṅgama as one.
Translated by: L M A Menezes, S M Angadi
Tamil Translationஇலிங்கத்தைப் பூசித்து, ஜங்கமரைக்
கண்டு அலட்சியம் செய்யின்
இலிங்கத்தைப் பூசித்தோருக்கு, சிவதூதர்களின்
தண்டனை என்பது ஆகும்
உலகத்திலுள்ள, வினைசெய்தவர்களுக்குச் செய்த
யமதூதர்களின் தண்டனை ஆகும்
எனவே, இலிங்க ஜங்கமம் ஒன்றே என அறியாதவரை
எனக்குக் காட்டாதீர் ஐயனே
கூடல சங்கமதேவனே.
Translated by: Smt. Kalyani Venkataraman, Chennai
Telugu Translationలింగమును పూజించి
జంగముని ఉపేక్షించు
నా లింగ పూజకులకు
శివదూతల శిక్ష తప్పదు
లౌకిక కర్మఠులకు
యమదూతల శిక్ష తప్పునె?
కాన లింగజంగముల నొకటే
యని తెలియనివారిని నాకు
చూపకయ్యా కూడల సంగమ దేవా !
Translated by: Dr. Badala Ramaiah
ಕನ್ನಡ ವ್ಯಾಖ್ಯಾನಲಿಂಗಪೂಜಕ(ಲಿಂಗಾಯತ)ರಲ್ಲದವರಿಗೆ ಯಮದೂತರು ದಂಡಿಸುವರೆಂದೂ-ಲಿಂಗಪೂಜಕ (ಲಿಂಗಾಯತ)ರಾದವರು ಲಿಂಗಪೂಜೆಯನ್ನಾದರೂ ಮಾಡುವರಾದ್ದರಿಂದ ಅವರು ಜಂಗಮವನ್ನು ಉದಾಸೀನ ಮಾಡಿದರೂ ಅವರಿಗೆ ಉತ್ತಮ ದರ್ಜೆಯ (ಅಥವಾ ಲಿಂಗಾಯತರೇ ಆದ) ಶಿವದೂತರು ದಂಡಿಸುವರೆಂದು ಹೇಳುತ್ತಿರುವ ಈ ವಚನ ಎಷ್ಟು ಹಾಸ್ಯಾಸ್ಪದವಾಗಿದೆಯೆಂಬುದನ್ನು-ಕಟ್ಟಿದ ಕೂಟವಚನಕಾರನು ಊಹಿಸಲಾರದೇ ಹೋದ.
ವಾಸ್ತವವಾಗಿ ಲಿಂಗಪೂಜಕರು ತಮ್ಮ ಸಮಯಾಚಾರವನ್ನು ಮೀರಿ ಜಂಗಮವನ್ನು ಉದಾಸೀನ ಮಾಡಿದರೆ ಅವರಿಗೆ ಘೋರ ನರಕವೆಂದು ಬಸವಣ್ಣನವರು ಈ ಹಿಂದಿನ ವಚನದಲ್ಲೇ ಹೇಳಿರುವಾಗ-ಲಿಂಗ ಪೂಜಕ(ಲಿಂಗಾಯತ)ರೆಂದೂ, ಲೋಕದ ಕರ್ಮಿ(ಲಿಂಗಾಯತರಲ್ಲದ ಜನ)ಗಳೆಂದೂ ಅನವಸರವಾಗಿ ಮೇಲು ಕೀಳನ್ನು ನಿರುಗೆ ಮಾಡಿರುವ ಈ ವಚನ ಬಸವಣ್ಣನವರದಲ್ಲ.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.