ಅರ್ಥ ಪ್ರಾಣಭಿಮಾನವನೊಪ್ಪಿಸಿದಲ್ಲಿ ಭಕ್ತನಪ್ಪನೆ ? ಅಲ್ಲ.
ಆದಿರುದ್ರನ ಮಗಳು ಆದಿಶಕ್ತಿ: ಆದಿಶಕ್ತಿಯ ಮಗ ವಿಷ್ಣು;
ವಿಷ್ಣುವಿನ ಅರ್ಧಾಂಗಿ ಲಕ್ಷ್ಮಿ.
ಈ ತೊತ್ತಿನ ತೊತ್ತಿನ ಪಡಿದೊತ್ತನೊಪ್ಪಿಸಿದಲ್ಲಿ ಭಕ್ತನಪ್ಪನೆ? ಅಲ್ಲ.
ಎನ್ನ ಮನದೊಡೆಯ ಮಹಾದೇವಾ,
ನಿಮ್ಮ ಮನವ ನಿಮಗೊಪ್ಪಿಸಿ ನಾ ಶುದ್ಧ, ಕಾಣಾ!
ಕೂಡಲಸಂಗಮದೇವಾ.
Art
Manuscript
Music Courtesy:
Video
TransliterationArtha prāṇābhimānavanoppisidaḷu bhaktanappane? Alla.
Ādirudrana magaḷu ādiśakti: Ādiśaktiya maga viṣṇu;
viṣṇuvina ardhāṅgi lakṣmi.
Ī tottina tottina paḍidottanoppisidaḷu bhaktanappane? Alla.
Enna manadoḍeya mahādēva,
nim'ma manava nimagoppisi nā śud'dha, kāṇā!
Kūḍalasaṅgamadēvā.
Hindi Translationअर्थ प्राणाभिमान अर्पित करूँ,
तो भक्त बनूँगा? नहीं!
आदि रूद्र की पुत्री आदिशक्ति है,
आदिशक्ति का पुत्र विष्णु है,
विष्णु की अर्धांगिनी लक्ष्मी है,
इस दासी की दासी की दासी को
अर्पित करूँ तो भक्त बनूँगा? नहीं,
मेरे मन के स्वामी, महादेव
तव मन तुम्हें अर्पित कर
मैं शुद्ध हूँ कूडलसंगमदेव ॥
Translated by: Banakara K Gowdappa
English Translation Would I be a bhakta if I gave away
My wealth, my life, my pride? Oh, no!
The Primal Rudra's daughter is
The Primal Force;Viṣṇu her son;
And Lakúmi, Viṣṇu's spouse....
Woul I be a bhakta if I gave away
This handmaid of a handmaid's maid?
Oh, no! Great God, lord of my heart,
Only by offering Thy heart to Thee,
Shall I be pure:
That's so,Kūḍala Saṅgama Lord!
Translated by: L M A Menezes, S M Angadi
Tamil Translationசெல்வம், உயிர், அபிமானத்தை அளிப்பின்
பக்தன் ஆவானோ? அல்ல
ஆதி உருத்திரனின் மகள் ஆதி சக்தி, ஆதிசக்தியின்
மகன் திருமால், திருமாலின் மனைவி இலக்குமி
இந்தத் தொண்டனின் தொண்டனின் தொண்டனின்
கீழுள்ள தொண்டனை அளிப்பின் பக்தன் ஆவானோ?
என் மனத்தின் உடையன் மகாதேவனே
உம் மனத்தை உமக்கீந்த தூயோன் நான் காணாய்
கூடல சங்கமதேவனே
Translated by: Smt. Kalyani Venkataraman, Chennai
Telugu Translationఅర్థ ప్రాణాభిమానము లర్పించినంతనే
భక్తుడగునే! కాడు;
ఆదిరుద్రుని కూతురాదిశక్తి
ఆదిశక్తి బిడ్డ విష్ణువు;
విష్ణుని భార్య లక్ష్మి ఈ తొత్తు
తొత్తుకు తొత్తును విడువగనే
భక్తుడగునే కాడుమన్మనోనాయక
మహాదేవ నా మనసు నీకు సమర్పించి
నే శుచినౌదునయ్యా!
Translated by: Dr. Badala Ramaiah
Urdu TranslationTranslated by: Hameed Almas
ಸ್ಥಲ -
ಪ್ರಾಣಲಿಂಗಿಯ ಮಾಹೇಶ್ವರಸ್ಥಲವಿಷಯ -
ಭಕ್ತಿಭಾವ
ಶಬ್ದಾರ್ಥಗಳು
ಕನ್ನಡ ವ್ಯಾಖ್ಯಾನಬರೀ ದುಡ್ಡನ್ನು ಶಿವಾರ್ಪಿತ ಮಾಡಿದ ಮಾತ್ರದಿಂದ ಯಾರೂ ಭಕ್ತರಾಗುವುದಿಲ್ಲ. ಶ್ರೇಷ್ಠನಾದ ಶಿವನಿಗೆ ಸಮರ್ಪಿಸಿಕೊಳ್ಳಬಹುದಾದ ಸರ್ವಶ್ರೇಷ್ಠವಸ್ತುವೆಂದರೆ ಮನ. ಆ ಮನವನ್ನು ಶಿವನಿಗೆ ತೆತ್ತುಕೊಂಡವನೇ ಶಿವಭಕ್ತನಾಗಲು ಅರ್ಹನೆಂಬುದೀ ವಚನದ ಅಭಿಪ್ರಾಯ. ಮನವನ್ನು ಹೀಗೆ ಶಿವನಲ್ಲಿ ಲೀನಗೊಳ್ಳುವುದೇ ಶಿವಯೋಗವೆಂಬ ಧಾಟಿಯಿಂದ ಈ ವಚನ ಪ್ರಾಣಲಿಂಗಿಸ್ಥಲದಲ್ಲಿ ನಿರಿಗೆಗೊಂಡಿದೆ.
ಆದಿರುದ್ರ –ಆದಿಶಕ್ತಿ (ಮಗಳು) –(ಮಗ) ವಿಷ್ಣು +(ಇವನ ಹೆಂಡತಿ) ಲಕ್ಷ್ಮಿ.
ಶಿವ-ಸದಾಶಿವ-ಮಹೇಶ್ವರ ಎಂಬ ಮಹಾ ತತ್ತ್ವತ್ರಯದಲ್ಲಿ ಮಹೇಶ್ವರನನ್ನೇ ಆದಿರುದ್ರನೆಂದೂ, ಅವನ ಮಗನೇ ರುದ್ರನೆಂದೂ, ಆ ರುದ್ರನಿಂದ ವಿಷ್ಣು, ವಿಷ್ಣವಿಂದ ಬ್ರಹ್ಮನೂ ಹುಟ್ಟಿ ಸೃಷ್ಟಿಸ್ಥಿತಿ ಕಾರ್ಯ ನಡೆಯಿತೆಂದೂ ಹೇಳುವರು (ನೋಡಿ : ನನ್ನ ವೀರಶೈವ ತತ್ತ್ವಪ್ರಕಾಶ -ಪುಟ 50). ವಿ : ಅರ್ಥಪ್ರಾಣಭಿ ಮಾನವ ಎಂಬಲ್ಲಿ ಅರ್ಥವೆಂಬುದಷ್ಟೇ ಮೂಲ ಪಾಠವಿದ್ದಿರಬಹುದು.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.