ಕುಲಗೆಟ್ಟರೆ ಕೆಡಬಹುದಲ್ಲದೆ ಛಲಗೆಡಬಾರದು;
ಛಲಗೆಟ್ಟರೆ ಕೆಡಬಹುದಲ್ಲದೆ ಭಕ್ತಿಯ ಅನು ಕೆಡಬಾರದು,
ಭಕ್ತಿಯ ಅನು ಕೆಟ್ಟರೆ ಕೆಡಬಹುದಲ್ಲದೆ ಆಯತ ಕೆಡಬಾರದು;
ಆಯತ ಕೆಟ್ಟರೆ ಕೆಡಬಹುದಲ್ಲದೆ ಸ್ವಾಯತ ಕೆಡಬಾರದಯ್ಯಾ!
ಎಲೆ ಕೂಡಲಸಂಗಮದೇವಯ್ಯಾ, ಮುನ್ನ ಮುಟ್ಟಿತ್ತೆ ಮುಟ್ಟಿತ್ತು:
ಇನ್ನು ಮುಟ್ಟಿದೆನಾದರೆ ನಿಮ್ಮ ರಾಣಿವಾಸದಾಣೆ!
Art
Manuscript
Music Courtesy:
Video
TransliterationKulageṭṭare keḍabahudallade chalageḍabāradu;
chalageṭṭare keḍabahudallade bhaktiya anu keḍabāradu,
bhaktiya anu keṭṭare keḍabahudallade āyata keḍabāradu;
āyata keṭṭare keḍabahudallade svāyata keḍabāradayyā!
Ele kūḍalasaṅgamadēvayya, munna muṭṭittu:
Innu muṭṭidenādare nim'ma rāṇivāsadāna!
Hindi Translationजाति नष्ट हो, तो हो
किंतु मन की दृढता नष्ट न हो;
मन की दृढता नष्ट हो, तो हो
किंतु भक्ति-पद्धति नष्ट न हो;
भक्ति-पद्धति नष्ट हो, तो हो;
किंतु आयत नष्ट न हो;
आयत नष्ट हो, तो हो
किंतु स्वायत नष्ट न हो;
कूडलसंगमेश, पहले जो किया वह किया
आगे स्पर्श करुँ तो तव रनिवास की सौगंध है ॥
Translated by: Banakara K Gowdappa
English Translation Let my caste perish if it will,
But not my strength of mind;
Let my will perish if it will,
But not my piety a whit,
Let piety perish if it will
But not the grace that comes to me;
Let this grace perish if it will,
But not the grace that is in me.
Let the bygone be bygone, O Lord
Kūḍala Saṅgama... should I relapse!
Let Guru's Curse be upon me!
Translated by: L M A Menezes, S M Angadi
Tamil Translationகுலம் கெடின் கெடலாமன்றி, உறுதிகெடலாகாது
உறுதி கெடின் கெடலாமன்றி பக்திமுறை கெடலாகாது
பக்திமுறை கெடின் கெடலாமன்றி, தீட்சை கெடலாகாது
தீட்சை கெடின் கெடலாமன்றி தொடர்பு கெடலாகாது
கூடல சங்கமதேவனே, முன்பு துய்த்ததே துய்த்தது
இன்னும் துய்ப்பின், உம் தேவியின் மீது ஆணை.
Translated by: Smt. Kalyani Venkataraman, Chennai
Telugu TranslationTranslated by: Dr. Badala Ramaiah
Urdu TranslationTranslated by: Hameed Almas
ಸ್ಥಲ -
ಶರಣನ ಮಾಹೇಶ್ವರಸ್ಥಲವಿಷಯ -
ಆತ್ಮಶುದ್ಧಿ
ಶಬ್ದಾರ್ಥಗಳು
ಕನ್ನಡ ವ್ಯಾಖ್ಯಾನಕುಲಧರ್ಮ, ಅದನ್ನು ರಕ್ಷಿಸಿಕೊಳ್ಳುವಲ್ಲಿ ತಾಳಬೇಕಾದ ಛಲ, ಆ ಛಲದಿಂದ ಅನುಸರಿಸಬೇಕಾದ ಶಿವಭಕ್ತಿಯ ವಿಧಿವಿಧಾನ, ಅದರಿಂದ ಮಾಡಬೇಕಾದ ಇಷ್ಟಲಿಂಗಪೂಜೆ –ಇವನ್ನು ಒಂದಲ್ಲ ಒಂದು ಪರಿಸರದ ಒತ್ತಡದಿಂದಾಗಿ ನಿರ್ವಹಿಸಲಾಗದಿದ್ದರೂ ಪ್ರಾಣಲಿಂಗೋಪಸನೆಯನ್ನು ಎಂದಿಗೂ ಯಾವ ಕಾರಣಕ್ಕಾಗಿಯೇ ಆಗಲಿ ಬಿಡುವುದು ಸಲ್ಲದು.
ಕುಲ ಛಲ ಭಕ್ತಿವಿಧಾನ ಇಷ್ಟಲಿಂಗಪೂಜೆಗೆ ಸಂಬಂಧಿಸಿದ ಆಚರಣೆಗಳು ಬಾಹಿರಂಗಿಕವಾದುವು. ಪ್ರಾಣಲಿಂಗೋಪಾಸನೆಯಾದರೋ ತೀರ ಆಂತರಂಗಿಕ.
ಅಂತರಂಗವು ಬಹಿರಂಗದಂತೆ ಪರಿಸರಕ್ಕೆ ಸುಲಭವಾಗಿ ಬಲಿಬೀಳುವುದಿಲ್ಲ. ಅದು ಸಾಧಕನ ಸ್ವಕೀಯ ಶುದ್ಧಿಸಂಯಮಗಳ ಮೇಲೆಯೇ ಅವಲಂಬಿಸಿರುವುದಾಗಿ –ಆ ಮಾನಸಘಟ್ಟಿತನವೇ ಅವನ ಸಿದ್ಧಿಯ ಸಾಕ್ಷಿಯೂ ಆಗಿರುವುದು.
ಆದ್ದರಿಂದ ಸ್ವಾಯತ(ಪ್ರಾಣಲಿಂಗೋಪಾಸನ)ವು ಅನುಲ್ಲಂಘನೀಯವಾದ ಧಾರ್ಮಿಕಾಚರಣೆ –ಎನ್ನುತ್ತಿರುವರು ಬಸವಣ್ಣನವರು. ಬಸವಣ್ಣನವರ ಜೀವನವು ಲೌಕಿಕವಾದ ಹಲವು ತುಮುಲಗಳಿಗೆ ತುಯ್ತಗಳಿಗೆ ಒಳಗಾಗಿದ್ದ ಅತ್ಯಂತ ಸಂಕೀರ್ಣ ಜೀವನ. ಅಲ್ಲಿ ಅವರು ಉತ್ತೀರ್ಣರಾದುದು (ಮೇಲೆ ಹೇಳಿದ) ತಮ್ಮ ಅಂತರಂಗನಿಷ್ಠೆ (ಸ್ವಾಯತೋಪಾಸನೆ)ಯಿಂದಲೇ.
ಹೀಗಾಗಿ ಅವರು ತಾಯಿ ಪಾರ್ವತಿಯ ಮೇಲೆ ಅಣೆಯಿಟ್ಟು ಆ ತಮ್ಮ ಅಂತರಂಗವನ್ನು ಎಲ್ಲ ವಿಧವಾದ ಪ್ರದೂಷಣಗಳಿಂದಲು ಸಂರಕ್ಷಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡುತ್ತಿರುವರು. (ಬಸವಣ್ಣನವರು ಇಷ್ಟಲಿಂಗಕ್ಕೆ ಕೊಟ್ಟ ಒಂದು ಪರಿಮಿತಮೌಲ್ಯವನ್ನು ಇಲ್ಲಿ ಗುರುತಿಸಬಹುದು).
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.