Index   ವಚನ - 58    Search  
 
ಸಂಗನಬಸವಣ್ಣ ಎನ್ನ ಕರಸ್ಥಲಕ್ಕೆ ಬಂದ ಕಾರಣ ಎನಗೆ ಗುರುರೂಪಾದನಯ್ಯಾ. ಚನ್ನಬಸವಣ್ಣನೆನ್ನ ಕರಸ್ಥಲಕ್ಕೆ ಬಂದ ಕಾರಣ ಎನಗೆ ಲಿಂಗರೂಪಾದನಯ್ಯಾ. ಪ್ರಭುದೇವರೆನ್ನ ಕರಸ್ಥಲಕ್ಕೆ ಬಂದ ಕಾರಣ ಎನಗೆ ಪ್ರಾಣಲಿಂಗವಾದನಯ್ಯಾ. ಇವರು ಮೂವರಿಗೆ ನಾ ಭಕ್ತನಾಗಿ ಹುಟ್ಟಿದೆನಾಗಿ ರೇಕಣ್ಣಪ್ರಿಯ ನಾಗಿನಾಥನೆನಗೆ ಒಚ್ಚತವಾದನಯ್ಯಾ.