ಪಂಚರತ್ನವೆಂಬ ಆಕಾರದ ಚಿತ್ಪಿಂಡದೊಳಗೆ
ಸವಿಯುವ ಸವಿಯ ಸವಿದು ನೋಡುತ್ತಿರಲು ಒಂದು ಸ್ಥಾನವುಂಟು.
ಆ ಸ್ಥಾನದೊಳಗೆ ದಿವ್ಯರತ್ನದ ಕುಂಭವುಂಟು.
ಆ ಕುಂಭದೊಳಗೊಂದು ಮಹಾರತ್ನದ ಕಮಲವುಂಟು.
ಆ ಕಮಲದೊಳಗಣ ಅನಾದಿ ಅಮೃತದೊಳಗೆ ನೇಹವ ಶುದ್ಧವ ಮಾಡಿ
ಆ ಕಮಲದ ನನೆಯ ಹತ್ತಿ, ಇನಿದಾಗಿ ಉಂಡುಂಡು
ಅನುವಾಗಿ ನಿಂದು ನೋಡುವ ಸುಳುಹು ಬೆಳಗು ತಾನೆ ಕಾ[ಣಾ],
ಬಸವಪ್ರಿಯ ವಿಶ್ವಕರ್ಮಟಕ್ಕೆ
ಕಾಳಿಕಾವಿಮಲ ರಾಜೇಶ್ವರಲಿಂಗವು ನಿರಾಳ ನಿಶ್ಚಿಂತನು.
Art
Manuscript
Music
Courtesy:
Transliteration
Pan̄caratnavemba ākārada citpiṇḍadoḷage
saviyuva saviya savidu nōḍuttiralu ondu sthānavuṇṭu.
Ā sthānadoḷage divyaratnada kumbhavuṇṭu.
Ā kumbhadoḷagondu mahāratnada kamalavuṇṭu.
Ā kamaladoḷagaṇa anādi amr̥tadoḷage nēhava śud'dhava māḍi
ā kamalada naneya hatti, inidāgi uṇḍuṇḍu
anuvāgi nindu nōḍuva suḷuhu beḷagu tāne kā[ṇā],
basavapriya viśvakarmaṭakke
kāḷikāvimala rājēśvaraliṅgavu nirāḷa niścintanu.