Index   ವಚನ - 22    Search  
 
ಪೃಥ್ವಿಯ ಮರೆಯ ಸುವರ್ಣದಂತೆ ಚಿಪ್ಪಿನ ಮರೆಯ ಮುತ್ತಿನಂತೆ ಅಪ್ಪುವಿನ ಮರೆಯ ಅಗ್ನಿಯಂತೆ ಒಪ್ಪದೊಳಗಣ ಮಹಾಪ್ರಕಾಶದಂತೆಯಿಪ್ಪ ಘನಲಿಂಗವನರಿಯೆ. ರುದ್ರ ಬ್ರಹ್ಮ ವಿಷ್ಣ್ವಾದಿಗಳು ತಮ್ಮ ಆತ್ಮಜ್ಞಾನ [ನಿಶ್ಚಿಂ]ತೆಯೆಂಬ ನಿಜವ ನೀಗಾಡಿಕೊಂಡರು. ಇದನರಿಯದೆ ಆಚರಿಸುವರು, ಆರಿಗೂ ಅಳವಲ್ಲವಯ್ಯಾ. ಇಷ್ಟಪ್ರಾಣಭಾವಸಂಬಂಧಿಗಳಪ್ಪ ಸದ್ಭಾವಾಚಾರವೆಡೆಗೊಂಡ ಶರಣಂಗಲ್ಲದೆ ಮಿಕ್ಕಿನ ದುರಾಚಾರಿಗಳಿಗೆ ಸಾಧ್ಯವಲ್ಲ, ಬಸವಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾವಿಮಲ ರಾಜೇಶ್ವರಲಿಂಗವು.