Index   ವಚನ - 116    Search  
 
ಅಂಥ ಬ್ರಹ್ಮಾಂಡವ ಹದಿನೈದುಲಕ್ಷದ ಮೇಲೆ ಸಾವಿರದನೂರಾನಲವತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ಚಾರುಭೂತಿಯೆಂಬ ಭುವನ. ಆ ಭುವನದೊಳು ಭಸ್ಮಧರನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಐನೂರೆಪ್ಪತ್ತುಕೋಟಿ ಬ್ರಹ್ಮ-ನಾರಾಯಣ-ರುದ್ರರಿಹರು ನೋಡಾ. ಐನೂರೆಪ್ಪತ್ತುಕೋಟಿ ಇಂದ್ರ-ಚಂದ್ರಾದಿತ್ಯರು ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.