ಇನ್ನು ಅಖಂಡಮಹಾಜ್ಯೋತಿಪ್ರಣವದ
ಜ್ಯೋತಿಸ್ವರೂಪದಲ್ಲಿ ಮಕಾರ ಉತ್ಪತ್ಯ.
ಆ ಪ್ರಣವದ ಕುಂಡಲಾಕಾರದಲ್ಲಿ ಅಕಾರ ಉತ್ಪತ್ಯ.
ಆ ಪ್ರಣವದ ತಾರಕಾಸ್ವರೂಪದಲ್ಲಿ ಉಕಾರ ಉತ್ಪತ್ಯವಾಯಿತ್ತು ನೋಡಾ.
ಇದಕ್ಕೆ ಚಕ್ರಾತೀತಾಗಮೇ: ಶ್ರೀ ಮಹಾದೇವ ಉವಾಚ-
ಓಂಕಾರಂ ಜ್ಯೋತಿರೂಪಂ ಚ ಮಕಾರಂ ಚ ಪ್ರಜಾಯತೇ |
ಓಂಕಾರಂ ಕುಂಡಲಾಕಾರಂ ಅಕಾರಂ ಚ ಪ್ರಜಾಯತೇ ||
ಓಂಕಾರಂ ತಾರಕಾರೂಪೇ ಉಕಾರಂ ಚ ಪ್ರಜಾಯತೇ |
ಇತ್ಯಕ್ಷರತ್ರಯಂ ದೇವಿ ಸ್ಥಾನಸ್ಥಾನೇಷು ಜಾಯತೇ ||''
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.