Index   ವಚನ - 256    Search  
 
ಷಷ್ಠಿಮಾಸಕ್ಕೆ ಕಂಧರ ಉದರ ಪುಟ್ಟುವುದು. ಸಪ್ತಮಾಸಕ್ಕೆ ಗುಹ್ಯ ಪಾದ ಪುಟ್ಟುವುದು. ಅಷ್ಟಮಾಸಕ್ಕೆ ಸರ್ವಾಂಗಸಂಧಿ ಪುಟ್ಟುವದು ಸಂಪೂರ್ಣವಹುದು. ಇದಕ್ಕೆ ಶ್ರೀಮಹಾದೇವ ಉವಾಚ: ಕಂಧರಾಜೋದರಂ ಷಷ್ಠೇಗುಹ್ಯ ಪಾದಂ ಚ ಸಪ್ತಮೇ | ಸರ್ವಾಂಗ ಸಂಧಿ ಸಂಪೂರ್ಣೇ ಮಾಸೇ ಸ್ಯಾದಷ್ಟಭಿಃ ಪ್ರಿಯೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.