ಇನ್ನು ಸಪ್ತಸಮುದ್ರಂಗಳ, ಸಪ್ತದ್ವೀಪಂಗಳ,
ಸಪ್ತಕುಲಪರ್ವತಂಗಳ ವಳಯಾಕೃತವಾಗಿ ಸುತ್ತಿಕೊಂಡಿಹ
ಲೋಕಾಲೋಕಪರ್ವತಂಗಳ ಸ್ಥಾನವದೆಂತೆಂದಡೆ:
ಮಲಯಜಪರ್ವತ, ಸಿಂಹಪರ್ವತ, ನೀಲಪರ್ವತ,
ಶ್ವೇತಪರ್ವತ, ಗವತಪರ್ವತ, ರಮ್ಯಪರ್ವತ,
ಉತ್ತರಕುರುಪರ್ವತ, ಸುಗಂಧಪರ್ವತ, ನಿರಾಕಾರಪರ್ವತ,
ಉದಾರಪರ್ವತ, ಮಣಿಶಿಖರಪರ್ವತ, ಅರ್ಧಚಂದ್ರಪರ್ವತ,
ಮಧುರಪರ್ವತ, ಮಣಿನಾಗಪರ್ವತ, ಮೈನಾಕಪರ್ವತ,
ಮಂದರಾಚಲಪರ್ವತ, ಉದಯಾದ್ರಿಪರ್ವತ,
ತ್ರಿಪುರಾಂತಕಪರ್ವತ, ಶ್ರೀರಾಮಪರ್ವತ,
ಮಾಲ್ಯವಂತಪರ್ವತ, ನಿಷಧಪರ್ವತ ಹೇಮಕೂಟಪರ್ವತ,
ವಿಂಧ್ಯಾಚಲಪರ್ವತ, ಗಂಧಾಚಲಪರ್ವತ,
ನೀಲಾಚಲಪರ್ವತ, ಮೇರುಮಂದಿರಪರ್ವತ,
ಶಬರೀಶ್ವರಪರ್ವತ, ಕುಮುದ ಉದಯಾದ್ರಿ, ದೇವಕೂಟ,
ಪವನಾಚಲ, ಪರಿಯಾತ್ರಾಚಲ, ಚಂದ್ರಾಚಲ, ಧಾರಾಚಲ,
ಷಡುಲಕ್ಷ್ಮೀ, ಕಪಿಲಗಿರಿ, ಮನಶ್ಶಾಂತಗಿರಿ, ಚಂದ್ರಗಿರಿ,
ನಾಗಗಿರಿ, ಲಘುಗಿರಿ, ಮಕರಗಿರಿ, ದ್ರೋಣಗಿರಿ,
ಅನಂತವಜ್ರಗಿರಿ, ನೀಲಗಿರಿ, ವರಗಿರಿ, ತ್ರಿಪುರಗಿರಿ,
ಸಿಂಹಗಿರಿ, ಶ್ರೀಕಂಠಗಿರಿ, ಚಕ್ರವಾಳಗಿರಿಪರ್ವತ,
ಇಂದ್ರಗಿರಿಪರ್ವತ, ಲೋಕಪರ್ವತಂಗಳೆಲ್ಲ ವಳಯಾಕೃತವಾಗಿ
ಆ ಪಿಂಡರೋಮಕೂಪಂಗಳಲ್ಲಿಹವು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Innu saptasamudraṅgaḷa, saptadvīpaṅgaḷa,
saptakulaparvataṅgaḷa vaḷayākr̥tavāgi suttikoṇḍ'̔iha
lōkālōkaparvataṅgaḷa sthānavadentendaḍe:
Malayajaparvata, sinhaparvata, nīlaparvata,
śvētaparvata, gavataparvata, ramyaparvata,
uttarakuruparvata, sugandhaparvata, nirākāraparvata,
udāraparvata, maṇiśikharaparvata, ardhacandraparvata,
madhuraparvata, maṇināgaparvata, mainākaparvata,
mandarācalaparvata, udayādriparvata,
tripurāntakaparvata, śrīrāmaparvata,
mālyavantaparvata, niṣadhaparvata hēmakūṭaparvata,
Vindhyācalaparvata, gandhācalaparvata,
nīlācalaparvata, mērumandiraparvata,
śabarīśvaraparvata, kumuda udayādri, dēvakūṭa,
pavanācala, pariyātrācala, candrācala, dhārācala,
ṣaḍulakṣmī, kapilagiri, manaśśāntagiri, candragiri,
nāgagiri, laghugiri, makaragiri, drōṇagiri,
anantavajragiri, nīlagiri, varagiri, tripuragiri,
sinhagiri, śrīkaṇṭhagiri, cakravāḷagiriparvata,
indragiriparvata, lōkaparvataṅgaḷella vaḷayākr̥tavāgi
ā piṇḍarōmakūpaṅgaḷallihavu nōḍā
apramāṇakūḍalasaṅgamadēvā.