ಇನ್ನು ಪಂಚಾಕ್ಷರಿಯಸ್ಥಲವೆಂತೆಂದೊಡೆ:
ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರಪ್ರಣವದ
ದಕ್ಷಿಣಭಾಗದಲ್ಲಿ ಅಕಾರೋತ್ಪತ್ಯವಾಯಿತ್ತು.
ಆ ಪ್ರಣವದ ವಾಮಭಾಗದಲ್ಲಿ ಉಕಾರೋತ್ಪತ್ಯವಾಯಿತ್ತು.
ಆ ಪ್ರಣವದ ಪೂರ್ವಭಾಗದಲ್ಲಿ ಮಕಾರೋತ್ಪತ್ಯವಾಯಿತ್ತು ನೋಡಾ.
ಇದಕ್ಕೆ ಈಶ್ವರ ಉವಾಚ:
``ಓಂಕಾರ ದಕ್ಷಿಣೇಭಾಗೇ ಅಕಾರಂ ಚಾಪಿ ಜಾಯತೇ |
ಓಂಕಾರ ವಾಮಭಾಗೇ ಚ ಉಕಾರಂಚೋದ್ಭವಂ ಸದಾ ||
ಓಂಕಾರ ಪೂರ್ವಭಾಗೇ ಚ ಮಕಾರಂ ಚ ಸಮುದ್ಭವಂ |
ಇತಿ ತ್ರಿಯಕ್ಷರಂ ದೇವಿ ಸ್ಥಾನಸ್ಥಾನೇಷು ಜಾಯತೇ ||''
ಇಂತೆಂದುದಾಗಿ,
ಅಪ್ರಮಾಣ ಕೂಡಲಸಂಗಮೇವಾ.
Art
Manuscript
Music
Courtesy:
Transliteration
Innu pan̄cākṣariyasthalaventendoḍe:
Akhaṇḍa jyōtirmayavāgiha gōḷakākārapraṇavada
dakṣiṇabhāgadalli akārōtpatyavāyittu.
Ā praṇavada vāmabhāgadalli ukārōtpatyavāyittu.
Ā praṇavada pūrvabhāgadalli makārōtpatyavāyittu nōḍā.
Idakke īśvara uvāca:
``Ōṅkāra dakṣiṇēbhāgē akāraṁ cāpi jāyatē |
ōṅkāra vāmabhāgē ca ukāran̄cōdbhavaṁ sadā ||
ōṅkāra pūrvabhāgē ca makāraṁ ca samudbhavaṁ |
iti triyakṣaraṁ dēvi sthānasthānēṣu jāyatē ||''
intendudāgi,
apramāṇa kūḍalasaṅgamēvā.