Index   ವಚನ - 338    Search  
 
ಇನ್ನು ಆ ಅಕಾರ ಉಕಾರ ಮಕಾರ ಇವು ಮೂರು ಬೀಜಾಕ್ಷರ. ಅಕಾರವೇ ನಾದ, ಉಕಾರವೇ ಬಿಂದು, ಮಕಾರವೇ ಕಳೆ. ಅಕಾರವೇ ರುದ್ರ, ಉಕಾರವೇ ಈಶ್ವರ, ಮಕಾರವೇ ಸದಾಶಿವ. ಅಕಾರವೆಂಬ ಪ್ರಣವದಲ್ಲಿ ನಕಾರ ಮಕಾರ ಉತ್ಪತ್ಯ ಲಯ. ಉಕಾರವೆಂಬ ಪ್ರಣವದಲ್ಲಿ ಶಿಕಾರ ವಕಾರ ಉತ್ಪತ್ಯ ಲಯ. ಮಕಾರವೆಂಬ ಪ್ರಣವದಲ್ಲಿ ಯಕಾರ ಆತ್ಮನುತ್ಪತ್ಯ ಲಯ. ಅಕಾರ ಮಕಾರ ಉಕಾರ ಸಂಯುಕ್ತವಾಗಿ ಓಂಕಾರ ಉತ್ಪತ್ಯವಾಯಿತ್ತು ನೋಡಾ. ಇದಕ್ಕೆ ಓಂಕಾರೋಪನಿಷತ್: ಅಕಾರವೆಂಬ ಪ್ರಣವದಲ್ಲಿ- ``ನಕಾರಶ್ಚ ಮಕಾರೋ ಭವತಿ | ಓಂ ರುದ್ರೋ ದೇವತಾ | ಅಕಾರೇ ಚ ಲಯಂ ಪ್ರಾಪ್ತೇ ದ್ವಿತೀಯೇ ಪ್ರಣವಾಂಶಿಕೇ ||'' ಉಕಾರವೆಂಬ ಪ್ರಣವದಲ್ಲಿ- ``ಶಿಕಾರಶ್ಚ ನಕಾರೋ ಭವತಿ | ಓಂ ಈಶ್ವರೋ ದೇವತಾ | ಉಕಾರೇ ಚ ಲಯಂ ಪ್ರಾಪ್ತೇ ತೃತೀಯಂ ಪ್ರಣವಾಂಶಿಕೇ ||'' ಮಕಾರವೆಂಬ ಪ್ರಣವದಲ್ಲಿ- ``ಯಕಾರಶ್ಚಾತ್ಮಾ ಭವತಿ | ಓಂ ಸದಾಶಿವೋ ದೇವತಾ | ಮಕಾರೇ ಚ ಲಯಂ ಪ್ರಾಪ್ತೇ ಚತುರ್ಥಂ ಪ್ರಣವಾಂಶಿಕೇ ||'' ``ಅಕಾರೇ ಚ ಉಕಾರೇ ಚ ಮಕಾರೇ ಚ ತ್ರಯಕ್ಷರಂ | ಅಕಾರಂ ನಾದರೂಪೇಣಂ ಉಕಾರಂ ಬಿಂದುರುಚ್ಯತೇ | ಮಕಾರಂತಿ ಕಲಾಶ್ಚೈವ ನಾದಬಿಂದುಕಲಾತ್ಮನೇ | ನಾದಬಿಂದುಕಲಾಯುಕ್ತೋ ಓಂಕಾರೋ ಪರಮೇಶ್ವರಃ || ವಕಾರಂ ತಾರಕಾರೂಪಂ ಮಕಾರಂ ದಂಡ ಉಚ್ಯತೇ | ಶಿಕಾರಂ ಕುಂಡಲಾಕಾರಂ ವಕಾರಶ್ಚಾರ್ಧಚಂದ್ರಕಂ | ಯಕಾರಂ ದರ್ಪಣಾಕಾರಂ ಓಂಕಾರೋ ಜ್ಯೋತಿರೂಪಕಂ | ಇತಿ ಪ್ರಣವಂ ವಿಜ್ಞೇಯಂ ಏತದ್ಗೋಪ್ಯಂ ವರಾನನೇ || ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.