ಇನ್ನು ಆ ಅಕಾರ ಉಕಾರ ಮಕಾರ ಇವು ಮೂರು ಬೀಜಾಕ್ಷರ.
ಅಕಾರವೇ ನಾದ, ಉಕಾರವೇ ಬಿಂದು, ಮಕಾರವೇ ಕಳೆ.
ಅಕಾರವೇ ರುದ್ರ, ಉಕಾರವೇ ಈಶ್ವರ, ಮಕಾರವೇ ಸದಾಶಿವ.
ಅಕಾರವೆಂಬ ಪ್ರಣವದಲ್ಲಿ ನಕಾರ ಮಕಾರ ಉತ್ಪತ್ಯ ಲಯ.
ಉಕಾರವೆಂಬ ಪ್ರಣವದಲ್ಲಿ ಶಿಕಾರ ವಕಾರ ಉತ್ಪತ್ಯ ಲಯ.
ಮಕಾರವೆಂಬ ಪ್ರಣವದಲ್ಲಿ ಯಕಾರ ಆತ್ಮನುತ್ಪತ್ಯ ಲಯ.
ಅಕಾರ ಮಕಾರ ಉಕಾರ ಸಂಯುಕ್ತವಾಗಿ
ಓಂಕಾರ ಉತ್ಪತ್ಯವಾಯಿತ್ತು ನೋಡಾ.
ಇದಕ್ಕೆ ಓಂಕಾರೋಪನಿಷತ್:
ಅಕಾರವೆಂಬ ಪ್ರಣವದಲ್ಲಿ-
``ನಕಾರಶ್ಚ ಮಕಾರೋ ಭವತಿ | ಓಂ ರುದ್ರೋ ದೇವತಾ |
ಅಕಾರೇ ಚ ಲಯಂ ಪ್ರಾಪ್ತೇ ದ್ವಿತೀಯೇ ಪ್ರಣವಾಂಶಿಕೇ ||''
ಉಕಾರವೆಂಬ ಪ್ರಣವದಲ್ಲಿ-
``ಶಿಕಾರಶ್ಚ ನಕಾರೋ ಭವತಿ | ಓಂ ಈಶ್ವರೋ ದೇವತಾ |
ಉಕಾರೇ ಚ ಲಯಂ ಪ್ರಾಪ್ತೇ ತೃತೀಯಂ ಪ್ರಣವಾಂಶಿಕೇ ||''
ಮಕಾರವೆಂಬ ಪ್ರಣವದಲ್ಲಿ-
``ಯಕಾರಶ್ಚಾತ್ಮಾ ಭವತಿ | ಓಂ ಸದಾಶಿವೋ ದೇವತಾ |
ಮಕಾರೇ ಚ ಲಯಂ ಪ್ರಾಪ್ತೇ ಚತುರ್ಥಂ ಪ್ರಣವಾಂಶಿಕೇ ||''
``ಅಕಾರೇ ಚ ಉಕಾರೇ ಚ ಮಕಾರೇ ಚ ತ್ರಯಕ್ಷರಂ |
ಅಕಾರಂ ನಾದರೂಪೇಣಂ ಉಕಾರಂ ಬಿಂದುರುಚ್ಯತೇ |
ಮಕಾರಂತಿ ಕಲಾಶ್ಚೈವ ನಾದಬಿಂದುಕಲಾತ್ಮನೇ |
ನಾದಬಿಂದುಕಲಾಯುಕ್ತೋ ಓಂಕಾರೋ ಪರಮೇಶ್ವರಃ ||
ವಕಾರಂ ತಾರಕಾರೂಪಂ ಮಕಾರಂ ದಂಡ ಉಚ್ಯತೇ |
ಶಿಕಾರಂ ಕುಂಡಲಾಕಾರಂ ವಕಾರಶ್ಚಾರ್ಧಚಂದ್ರಕಂ |
ಯಕಾರಂ ದರ್ಪಣಾಕಾರಂ ಓಂಕಾರೋ ಜ್ಯೋತಿರೂಪಕಂ |
ಇತಿ ಪ್ರಣವಂ ವಿಜ್ಞೇಯಂ ಏತದ್ಗೋಪ್ಯಂ ವರಾನನೇ ||
ಇಂತೆಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Innu ā akāra ukāra makāra ivu mūru bījākṣara.
Akāravē nāda, ukāravē bindu, makāravē kaḷe.
Akāravē rudra, ukāravē īśvara, makāravē sadāśiva.
Akāravemba praṇavadalli nakāra makāra utpatya laya.
Ukāravemba praṇavadalli śikāra vakāra utpatya laya.
Makāravemba praṇavadalli yakāra ātmanutpatya laya.
Akāra makāra ukāra sanyuktavāgi
ōṅkāra utpatyavāyittu nōḍā.
Idakke ōṅkārōpaniṣat:
Akāravemba praṇavadalli-
``nakāraśca makārō bhavati | ōṁ rudrō dēvatā |
akārē ca layaṁ prāptē dvitīyē praṇavānśikē ||''
ukāravemba praṇavadalli-
``śikāraśca nakārō bhavati | ōṁ īśvarō dēvatā |
ukārē ca layaṁ prāptē tr̥tīyaṁ praṇavānśikē ||''
makāravemba praṇavadalli-
``yakāraścātmā bhavati | ōṁ sadāśivō dēvatā |
makārē ca layaṁ prāptē caturthaṁ praṇavānśikē ||''
``akārē ca ukārē ca makārē ca trayakṣaraṁ |
akāraṁ nādarūpēṇaṁ ukāraṁ bindurucyatē |
makāranti kalāścaiva nādabindukalātmanē |
Nādabindukalāyuktō ōṅkārō paramēśvaraḥ ||
vakāraṁ tārakārūpaṁ makāraṁ daṇḍa ucyatē |
śikāraṁ kuṇḍalākāraṁ vakāraścārdhacandrakaṁ |
yakāraṁ darpaṇākāraṁ ōṅkārō jyōtirūpakaṁ |
iti praṇavaṁ vijñēyaṁ ētadgōpyaṁ varānanē ||
intendudāgi,
apramāṇakūḍalasaṅgamadēvā.