Index   ವಚನ - 352    Search  
 
ಇನ್ನು ಪ್ರಥಮ ಲಿಂಗದಲ್ಲಿ, ದ್ವಿತೀಯ ಲಿಂಗದಲ್ಲಿ, ತೃತೀಯ ಲಿಂಗದಲ್ಲಿ ಮಾಡುವ ಪೂಜಾವಿಧಿ ಕ್ರಮವೆಂತೆಂದಡೆ: ಶಕ್ತಿ ಪ್ರಥಮಲಿಂಗ, ಆ ಲಿಂಗವೆ ಗುರುಲಿಂಗ, ಆ ಸನ್ನಿಧಿಯೇ ಶಿವಲಿಂಗ, ಆ ಲಿಂಗವೆ ಜಂಗಮಲಿಂಗ. ಇಂತೀ ತ್ರಿವಿಧವು ಗುರುಲಿಂಗದೊಳಗಿಹವು. ಇದಕ್ಕೆ ಈಶ್ವರೋsವಾಚ: ಶಕ್ತಿಃ ಸದ್ಗುರುಲಿಂಗಂ ಚ ಸನ್ನಿಧೌ ಶಿವಲಿಂಗಕಂ | ತಲ್ಲಿಂಗಂ ಜಂಗಮಲಿಂಗಂ ತ್ರಿವಿಧಂ ಗುರುಮಿಶ್ರಿತಂ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.