ಇನ್ನು ಷಟ್ಸ್ಥಲದ ಭೇದವೆಂತೆಂದಡೆ:
ಸದಾಚಾರದಲ್ಲಿ ನಡಹ, ಶಿವನಲ್ಲಿ ಭಕ್ತಿಯಾಗಿಹ,
ಲಿಂಗಜಂಗಮ ಒಂದೆಯೆಂಬ ಬುದ್ಧಿಯಾಗಿಹ,
ಲಾಂಛನಧಾರಿಗಳ ಕಂಡಡೆ ಒಂದಿಸುವುದೀಗ ಭಕ್ತಸ್ಥಲ ನೋಡಾ.
ಇದಕ್ಕೆ ಈಶ್ವರೋsವಾಚ:
ಸದಾಚಾರಂ ಶಿವೇ ಭಕ್ತಿಃ ಲಿಂಗಜಂಗಮೇ ರತಿಃ |
ಲಾಂಛನಂ ಚ ಶರಣ್ಯಂ ಚ ಭಕ್ತಿಸ್ಥಲಸುಬುದ್ಧಿಮಾನ್ || ''
ಇಂತೆಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Innu ṣaṭsthalada bhēdaventendaḍe:
Sadācāradalli naḍaha, śivanalli bhaktiyāgiha,
liṅgajaṅgama ondeyemba bud'dhiyāgiha,
lān̄chanadhārigaḷa kaṇḍaḍe ondisuvudīga bhaktasthala nōḍā.
Idakke īśvarōsvāca:
Sadācāraṁ śivē bhaktiḥ liṅgajaṅgamē ratiḥ |
lān̄chanaṁ ca śaraṇyaṁ ca bhaktisthalasubud'dhimān ||''
intendudāgi,
apramāṇakūḍalasaṅgamadēvā