ಅ ಅಖಂಡಮಹಾಮೂಲಸ್ವಾಮಿಯ ಸ್ಥಲದ ವಚನವೆಂತೆಂದಡೆ:
ನಿರಂಜನಾತೀತಪ್ರಣವ, ಅವಾಚ್ಯಪ್ರಣವ, ಕಲಾಪ್ರಣವ,
ಅನಾದಿಪ್ರಣವ, ಆದಿಪ್ರಣವ, ಶಿವಶಕ್ತಿಪ್ರಣವ,
ಶಿವಶಕ್ತಿರಹಿತವಾಗಿ ಮಹಾಪ್ರಣವ ಮೊದಲಾಗಿ
ಅನಂತಕೋಟಿಪ್ರಣವಂಗಳಿಲ್ಲದಂದು,
ಚಿತ್ತಾಕಾಶ ಚಿದಾಕಾಶ ಮಹದಾಕಾಶ ಪರಾಕಾಶ ಶಿವಾಕಾಶ ಬಿಂದ್ವಾಕಾಶ
ನಾದಾಕಾಶ ಕಲಾಕಾಶ ಪ್ರಣವಾಕಾಶ ಮೊದಲಾಗಿ
ಅನಂತಕೋಟಿ ಮಹಾಪ್ರಣವಾಕಾಶ, ಅತಿಮಹಾಪ್ರಣವಾಕಾಶ,
ಅತಿಮಹಾತೀತಪ್ರಣವಾಕಾಶಂಗಳಿಲ್ಲದಂದು,
ಆದಿ ಅನಾದಿ ಅನಾಗತ ಅನಂತ ಅದ್ಭುತ ತಮಂಧ ತಾರಜ
ತಂಡಜ ಭಿನ್ನಜ ಭಿನ್ನಾಯುಕ್ತ ಅವ್ಯಕ್ತ ಅಮದಾಯುಕ್ತ
ಮಣಿರಣ ಮಾನ್ಯರಣ ವಿಶ್ವಾರಣ ವಿಶ್ವಾವಸು ಅಲಂಕೃತ
ಕೃತಯುಗ ತ್ರೇತಾಯುಗ ಕಲಿಯುಗಂಗಳೆಂಬ
ಇಪ್ಪತ್ತೊಂದು ಯುಗ ಮೊದಲಾಗಿ ಅನಂತಕೋಟಿ ಮಹಾಯುಗಂಗಳು,
ಅತಿಮಹಾಯುಗಂಗಳು ಅತಿಮಹಾತೀತ ಮಹಾಯುಗಂಗಳಿಲ್ಲದಂದು,
ಆದಿಮೂಲ ಅನಾದಿಮೂಲಂಗಳಿಗತ್ತತ್ತವಾದ
ಮಹಾಮೂಲಸ್ವಾಮಿಯ ಮೀರಿದ ಅತಿಮಹಾಮೂಲಸ್ವಾಮಿಗತ್ತತ್ತವಾಗಿಹ
ಅಖಂಡ ಮಹಾಮೂಲಸ್ವಾಮಿ ಇದ್ದನಯ್ಯ ಇಲ್ಲದಂತೆ
ನಮ್ಮ ಅಪ್ರಮಾಣ ಕೂಡಲಸಂಗಮದೇವ.
Art
Manuscript
Music
Courtesy:
Transliteration
A akhaṇḍamahāmūlasvāmiya sthalada vacanaventendaḍe:
Niran̄janātītapraṇava, avācyapraṇava, kalāpraṇava,
anādipraṇava, ādipraṇava, śivaśaktipraṇava,
śivaśaktirahitavāgi mahāpraṇava modalāgi
anantakōṭipraṇavaṅgaḷilladandu,
cittākāśa cidākāśa mahadākāśa parākāśa śivākāśa bindvākāśa
nādākāśa kalākāśa praṇavākāśa modalāgi
anantakōṭi mahāpraṇavākāśa, atimahāpraṇavākāśa,
atimahātītapraṇavākāśaṅgaḷilladandu,
ādi anādi anāgata ananta adbhuta tamandha tāraja
Taṇḍaja bhinnaja bhinnāyukta avyakta amadāyukta
maṇiraṇa mān'yaraṇa viśvāraṇa viśvāvasu alaṅkr̥ta
kr̥tayuga trētāyuga kaliyugaṅgaḷemba
ippattondu yuga modalāgi anantakōṭi mahāyugaṅgaḷu,
atimahāyugaṅgaḷu atimahātīta mahāyugaṅgaḷilladandu,
ādimūla anādimūlaṅgaḷigattattavāda
mahāmūlasvāmiya mīrida atimahāmūlasvāmigattattavāgiha
akhaṇḍa mahāmūlasvāmi iddanayya illadante
nam'ma apramāṇa kūḍalasaṅgamadēva.