Index   ವಚನ - 416    Search  
 
ಆ ಅರ್ಬುದದಳಪದ್ಮದಲ್ಲಿ 'ಕೋಟಿದಳ ಪದ್ಮೋsದ್ಭವತಿ | ಓಂ ಶಿವಾತ್ಮಾ ದೇವತಾ |' ಎಂದುದಾಗಿ, ಅರ್ಬುದದಳಪದ್ಮದಲ್ಲಿ ಕೋಟಿದಳಪದ್ಮ ಉದ್ಭವಿಸಿ. ನಿರಾಳಚಕ್ರದಲ್ಲಿ ಅನಂತಜ್ಯೋತಿಪ್ರಕಾಶವಾಗಿಹುದು ನೋಡಾ ಅಪ್ರಮಾಣಕೂಡಲಸಂಗಮದೇವಾ.