Index   ವಚನ - 418    Search  
 
ಆ ಲಕ್ಷದಳಪದ್ಮದಲ್ಲಿ- 'ತ್ರಿಸಹಸ್ರದಳ ಪದ್ಮೋsದ್ಭವತಿ | ಓಂ ನಿರ್ಗುಣಾತ್ಮಾ ದೇವತಾ |' ಎಂದುದಾಗಿ, ಆ ಲಕ್ಷದಳ ಪದ್ಮದಲ್ಲಿ ತ್ರಿಸಹಸ್ರದಳ ಪದ್ಮ ಉದ್ಭವಿಸಿ ಅಣುಚಕ್ರದಲ್ಲಿ ಮಹಾತಮಂಧಜ್ಯೋತಿವರ್ಣವಾಗಿಹುದು ನೋಡಾ ಅಪ್ರಮಾಣಕೂಡಲಸಂಗಮದೇವಾ.