Index   ವಚನ - 440    Search  
 
ಸರ್ವಾತ್ಮತತ್ವದಲ್ಲಿ- 'ಏಕಾಕ್ಷರೋ ಭವತಿ | ಓಂ ಸರ್ವಾತ್ಮಾ ದೇವತಾ |' ಎಂದುದು ಶ್ರುತಿ. ಆ ಸರ್ವಾತ್ಮತತ್ವದಲ್ಲಿ ಏಕಾಕ್ಷರ ಉತ್ಪತ್ಯವಾಗಿ, ಪಶ್ಚಿಮಚಕ್ರದ ಏಕಾಕ್ಷರದಳಪದ್ಮದಲ್ಲಿ ನ್ಯಾಸವಾಗಿಹುದು ನೋಡಾ ಅಪ್ರಮಾಣಕೂಡಲಸಂಗಮದೇವಾ.