ವಿಶ್ವಾತ್ಮತತ್ವದಲ್ಲಿ-
'ಅಕ್ಷರತ್ರಯೋ ಭವತಿ | ಓಂ ವಿಶ್ವಾತ್ಮಾ ದೇವತಾ |'
ಎಂದುದು ಶ್ರುತಿ.
ಆ ವಿಶ್ವಾತ್ಮತತ್ವದಲ್ಲಿ ಅಕ್ಷರತ್ರಯ ಉತ್ಪತ್ಯವಾಗಿ
ಶಿಖಾಚಕ್ರದ ತ್ರಿದಳಪದ್ಮದಲ್ಲಿ ನ್ಯಾಸವಾಗಿಹುದು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Viśvātmatatvadalli-
'akṣaratrayō bhavati | ōṁ viśvātmā dēvatā |'
endudu śruti.
Ā viśvātmatatvadalli akṣaratraya utpatyavāgi
śikhācakrada tridaḷapadmadalli n'yāsavāgihudu nōḍā
apramāṇakūḍalasaṅgamadēvā.