Index   ವಚನ - 442    Search  
 
ಪರತತ್ವದಲ್ಲಿ- 'ಸಹಸ್ರದಳಾಕ್ಷರೋ ಭವತಿ | ಓಂ ಪರಮಾತ್ಮಾ ದೇವತಾ |' ಎಂದುದು ಶ್ರುತಿ. ಆ ಪರತತ್ವದಲ್ಲಿ ಸಹಸ್ರಾಕ್ಷರ ಉತ್ಪತ್ಯವಾಗಿ ಬ್ರಹ್ಮಚಕ್ರದ ಸಹಸ್ರದಳಪದ್ಮದಲ್ಲಿ ನ್ಯಾಸವಾಗಿಹುದು ನೋಡಾ ಅಪ್ರಮಾಣಕೂಡಲಸಂಗಮದೇವಾ.