Index   ವಚನ - 444    Search  
 
ತತ್ವಾತ್ಮತತ್ವದಲ್ಲಿ- 'ಚೌಷಷ್ಠಿದಳಾಕ್ಷರೋ ಭವತಿ | ಓಂ ತತ್ವಾತ್ಮಾ ದೇವತಾ |' ಎಂದುದು ಶ್ರುತಿ. ಆ ತತ್ವಾತ್ಮತತ್ವದಲ್ಲಿ ಚೌಷಷ್ಠಿ ಅಕ್ಷರಂಗಳುತ್ಪತ್ಯವಾಗಿ ನಿಶಾದಚಕ್ರದ ಚೌಷಷ್ಠಿದಳಪದ್ಮದಲ್ಲಿ ನ್ಯಾಸವಾಗಿಹುದು ನೋಡಾ ಅಪ್ರಮಾಣಕೂಡಲಸಂಗಮದೇವಾ.