Index   ವಚನ - 447    Search  
 
ಅಕಾರದಲ್ಲಿ ಪೃಥ್ವಿಯಗ್ನಿ ಋಗ್ವೇದ ಭೂಲೋಕ ಬ್ರಹ್ಮನುತ್ಪತ್ಯ ಲಯ ನೋಡಾ. ಆ ಉಕಾರದಲ್ಲಿ ಅಂತರಿಕ್ಷ ಯಜುರ್ವೆದ ವಾಯು ಭುವರ್ಲೊಕ ವಿಷ್ಣು ಉತ್ಪತ್ಯ ಲಯ ನೋಡಾ. ಆ ಮಕಾರದಲ್ಲಿ ದಿವಿ ಸೂರ್ಯ ಸಾಮವೇದ ಸ್ವರ್ಗಲೋಕ ಮಹೇಶ್ವರನುತ್ಪತ್ಯ ಲಯ ನೋಡಾ. ಇದಕ್ಕೆ ಓಂಕಾರೋಪನಿಷದಿ: ಪೃಥ್ವಿವ್ಯಗ್ನಿಃ ಋಗ್ವೇದೋ ಭವತೀತ್ಯೇವ ಪಿತಾಮಹಃ | ಅಕಾರೇ ತು ಲಯಂ ಪ್ರಾಪ್ತೇ ಷಷ್ಠಾದಶಪ್ರಣವಾಂಶಕೈಃ || ಅಂತರಿಕ್ಷಂ ಯಜುರ್ವಾಯುಃ ಭೂವೋ ವಿಷ್ಣುಃ ಸನಾತನಃ | ಉಕಾರೇ ತು ಲಯಂ ಪ್ರಾಪ್ತೇ ಸಪ್ತದಶಕ ಪ್ರಣವಾಂಶಕೈಃ || ದಿವಿ ಸೂರ್ಯಸ್ಸಾಮವೇದಃ ಸ್ಯೇರಿತ್ಯೇವಾ ಮಾಹೇಶ್ವರ | ಮಕಾರೇತು ಲಯಂ ಪ್ರಾಪ್ತೇ ಅಷ್ಟಾದಶಾಕ್ಷರಾಂಶಕೈಃ || ಅಕಾರೇ ಚ ಉಕಾರೇ ಚ ಮಕಾರೇಚಾಕ್ಷರತ್ರಯಂ | ಇದಮೇಕಂ ಸಮುತ್ಪನ್ನಂ ಓಂ ಇತಿ ಜ್ಯೋತಿರೂಪಕಂ || ಓಂಕಾರ ಪ್ರಭವಾ ವೇದಾಃ ಓಂಕಾರ ಪ್ರಭವಾ ಸ್ವರಾಃ | ಓಂಕಾರ ಪ್ರಭವಂ ಸರ್ವಂ ತ್ರೈಲೋಕ್ಯಂ ಸಚರಾಚರಂ | ಓಮಿತ್ಯೇಕಾಕ್ಷರಂ ಬ್ರಹ್ಮ ಓಂಕಾರೋ ಪರಮೇಶ್ವರಃ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.