ಇನ್ನು ಷಡ್ವಿಧಮುಖಂಗಳ ನೆಲೆ ಅದೆಂತೆಂದಡೆ:
ಆಧಾರಚಕ್ರದಲ್ಲಿ ಸದ್ಯೋಜಾತಮುಖವಿಹುದು.
ಸ್ವಾಧಿಷ್ಠಾನಚಕ್ರದಲ್ಲಿ ವಾಮದೇವಮುಖವಿಹುದು.
ಮಣಿಪೂರಕಚಕ್ರದಲ್ಲಿ ಅಘೋರಮುಖವಿಹುದು.
ಅನಾಹತಚಕ್ರದಲ್ಲಿ ತತ್ಪುರುಷಮುಖವಿಹುದು.
ವಿಶುದ್ಧಿಚಕ್ರದಲ್ಲಿ ಈಶಾನಮುಖವಿಹುದು.
ಆಜ್ಞಾಚಕ್ರದಲ್ಲಿ ನಿರ್ಭಾವಮುಖವಿಹುದು.
ಇದಕ್ಕೆ ಶಿವಧರ್ಮಸಂಹಿತಾಯಾಂ:
ಆಧಾರೇ ಚ ಸದ್ಯೋಜಾತಂ ಸ್ವಾಧಿಷ್ಠೇ ವಾಮದೇವಕಂ |
ಅಘೋರಂ ಮಣಿಪೂರೇ ಚ ತತ್ಪುರುಷಂ ಚ ಅನಾಹತೇ ||
ಈಶಾನಂ ಚ ವಿಶುದ್ಧಿಶ್ಚ ಆಜ್ಞೇ ನಿರ್ಭಾವಕಂ ತಥಾ |
ಇತಿ ಷಟ್ಮುಖಂ ದೇವಿ ಸ್ಥಾನ ಸ್ಥಾನೇ ಸಮಾಚರೇತ್ ||''
ಇಂತೆಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Innu ṣaḍvidhamukhaṅgaḷa nele adentendaḍe:
Ādhāracakradalli sadyōjātamukhavihudu.
Svādhiṣṭhānacakradalli vāmadēvamukhavihudu.
Maṇipūrakacakradalli aghōramukhavihudu.
Anāhatacakradalli tatpuruṣamukhavihudu.
Viśud'dhicakradalli īśānamukhavihudu.
Ājñācakradalli nirbhāvamukhavihudu.
Idakke śivadharmasanhitāyāṁ:
Ādhārē ca sadyōjātaṁ svādhiṣṭhē vāmadēvakaṁ |
aghōraṁ maṇipūrē ca tatpuruṣaṁ ca anāhatē ||
īśānaṁ ca viśud'dhiśca ājñē nirbhāvakaṁ tathā |
iti ṣaṭmukhaṁ dēvi sthāna sthānē samācarēt ||''
intendudāgi,
apramāṇakūḍalasaṅgamadēvā