Index   ವಚನ - 459    Search  
 
ಇನ್ನು ಷಡ್ವಿಧಭೂತಂಗಳ ನೆಲೆ ಅದೆಂತೆಂದಡೆ: ಆಧಾರಚಕ್ರದಲ್ಲಿ ಪೃಥ್ವಿಯೆಂಬ ಮಹಾಭೂತವಿಹುದು. ಸ್ವಾಧಿಷ್ಠಾನಚಕ್ರದಲ್ಲಿ ಅಪ್ಪುಯೆಂಬ ಮಹಾಭೂತವಿಹುದು. ಮಣಿಪೂರಕಚಕ್ರದಲ್ಲಿ ಅಗ್ನಿಯೆಂಬ ಮಹಾಭೂತವಿಹುದು. ಅನಾಹತಚಕ್ರದಲ್ಲಿ ವಾಯುವೆಂಬ ಮಹಾಭೂತವಿಹುದು. ವಿಶುದ್ಧಿಚಕ್ರದಲ್ಲಿ ಆಕಾಶವೆಂಬ ಮಹಾಭೂತವಿಹುದು. ಆಜ್ಞಾಚಕ್ರದಲ್ಲಿ ಮನವೆಂಬ ಮಹಾಭೂತವಿಹುದು ನೋಡಾ. ಇದಕ್ಕೆ ಮೃಗೇಂದ್ರಸಾರೇ: ಆಧಾರೇ ಪೃಥ್ವೀಭೂತಂ ಚ ಸ್ವಾಧಿಷ್ಠಾನೇ ಜಲಂ ತಥಾ || ಮಣಿಪೂರೇ ಚ ತೇಜಶ್ಚ ವಾಯುಭೂತಶ್ಚಾನಾಹತಂ || ಆಕಾಶಂ ಚ ವಿಶುದ್ಧಿಶ್ಚ ಆಜ್ಞೇಯಾಂ ಮನಏವ ಚ || ಇತಿ ಷಷ್ಠಭೂತಂ ಚೈವ ಸ್ಥಾನ ಸ್ಥಾನೇ ಸಮಾಚರೇತ್ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.