ಆ ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರಪ್ರಣವದ
ಜ್ಯೋತಿಸ್ವರೂಪದಲ್ಲಿ ಭಾವಹಸ್ತ ಹುಟ್ಟಿತ್ತು.
ಆ ಪ್ರಣವದ ದರ್ಪಣಾಕಾರದಲ್ಲಿ ಸುಜ್ಞಾನಹಸ್ತ ಹುಟ್ಟಿತ್ತು.
ಆ ಪ್ರಣವದ ಅರ್ಧಚಂದ್ರಕದಲ್ಲಿ ಸುಮನಹಸ್ತ ಹುಟ್ಟಿತ್ತು.
ಆ ಪ್ರಣವದ ಕುಂಡಲಾಕಾರದಲ್ಲಿ ನಿರಹಂಕಾರಹಸ್ತ ಹುಟ್ಟಿತ್ತು.
ಆ ಪ್ರಣವದ ದಂಡಕಸ್ವರೂಪದಲ್ಲಿ ಸುಬುದ್ಧಿಹಸ್ತ ಹುಟ್ಟಿತ್ತು.
ಆ ಪ್ರಣವದ ತಾರಕಸ್ವರೂಪದಲ್ಲಿ ಸುಚಿತ್ತಹಸ್ತ ಹುಟ್ಟಿತ್ತು ನೋಡಾ.
ಇದಕ್ಕೆ ಅತಿಮಹಾಗಮಸಾರೇ:
ಓಂಕಾರ ಜ್ಯೋತಿಸ್ವರೂಪೇ ಚ ಭಾವಹಸ್ತಂ ಚ ಜಾಯತೇ |
ಓಂಕಾರದರ್ಪಣಾಕಾರೇ ಜ್ಞಾನಹಸ್ತಂ ಚ ಜಾಯತೇ ||
ಓಂಕಾರಚಾರ್ಧಚಂದ್ರೇ ಚ ಮನೋಹಸ್ತಸ್ಯ ಜಾಯತೇ |
ಓಂಕಾರಕುಂಡಲಾಕಾರೇ ನಿರಹಂಕಾರಂ ಚ ಜಾಯತೇ ||
ಓಂಕಾರದಂಡಕಸ್ವರೂಪೇ ಚ ಬುದ್ಧಿಹಸ್ತಂ ಚ ಜಾಯತೇ |
ಓಂಕಾರತಾರಕರೂಪೇ ಚಿತ್ತಹಸ್ತಂ ಚ ಜಾಯತೇ |
ಇತಿ ಹಸ್ತಶ್ಚ ಷಡ್ದೇವಿ ಸ್ಥಾನಸ್ಥಾನೇಷು ಜಾಯತೇ ||''
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Ā akhaṇḍa jyōtirmayavāgiha gōḷakākārapraṇavada
jyōtisvarūpadalli bhāvahasta huṭṭittu.
Ā praṇavada darpaṇākāradalli sujñānahasta huṭṭittu.
Ā praṇavada ardhacandrakadalli sumanahasta huṭṭittu.
Ā praṇavada kuṇḍalākāradalli nirahaṅkārahasta huṭṭittu.
Ā praṇavada daṇḍakasvarūpadalli subud'dhihasta huṭṭittu.
Ā praṇavada tārakasvarūpadalli sucittahasta huṭṭittu nōḍā.
Idakke atimahāgamasārē:
Ōṅkāra jyōtisvarūpē ca bhāvahastaṁ ca jāyatē |
ōṅkāradarpaṇākārē jñānahastaṁ ca jāyatē ||
ōṅkāracārdhacandrē ca manōhastasya jāyatē |
ōṅkārakuṇḍalākārē nirahaṅkāraṁ ca jāyatē ||
ōṅkāradaṇḍakasvarūpē ca bud'dhihastaṁ ca jāyatē |
ōṅkāratārakarūpē cittahastaṁ ca jāyatē |
iti hastaśca ṣaḍdēvi sthānasthānēṣu jāyatē ||''
intendudāgi, apramāṇakūḍalasaṅgamadēvā