Index   ವಚನ - 476    Search  
 
ಇನ್ನು ಷಡ್ವಿಧಹಸ್ತಂಗಳ ನೆಲೆ ಅದೆಂತೆಂದಡೆ: ಆಧಾರಚಕ್ರದಲ್ಲಿ ಸುಚಿತ್ತಹಸ್ತವಿಹುದು. ಸ್ವಾಧಿಷ್ಠಾನಚಕ್ರದಲ್ಲಿ ಸುಬುದ್ಧಿಹಸ್ತವಿಹುದು. ಮಣಿಪೂರಕಚಕ್ರದಲ್ಲಿ ನಿರಹಂಕಾರಹಸ್ತವಿಹುದು. ಅನಾಹತಚಕ್ರದಲ್ಲಿ ಸುಮನಹಸ್ತವಿಹುದು. ವಿಶುದ್ಧಿಚಕ್ರದಲ್ಲಿ ಜ್ಞಾನಹಸ್ತವಿಹುದು. ಆಜ್ಞಾಚಕ್ರದಲ್ಲಿ ಭಾವಹಸ್ತವಿಹುದು ನೋಡಾ. ಇದಕ್ಕೆ ಚಕ್ರಾತೀತಾಗಮೇ: ಆಧಾರ ಸುಚಿತ್ತಂ ಚ ಸ್ವಾಧಿಷ್ಠಾನೇ ಸುಬುದ್ಧಿಕಂ | ಮಣಿಪೂರೇ ಚಾಹಂಕಾರಂ ಮನೋಹಸ್ತಂಚಾನಾಹತಂ || ವಿಶುದ್ಧಿ ಜ್ಞಾನಹಸ್ತಶ್ಚ ಆಜ್ಞಾಯಾಂ ಭಾವಹಸ್ತಕಂ | ಇತಿ ಹಸ್ತ ಭೇದಜ್ಞಾತುಂ ದುರ್ಲಭಂ ಚ ವರಾನನೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ