Index   ವಚನ - 477    Search  
 
ಏನು ಏನೂ ಎನಲಿಲ್ಲದ ಮಹಾಘನ ನಿರಂಜನ ವಸ್ತುವಿನ ನೆನಹುಮಾತ್ರದಲ್ಲಿ ನಿರ್ಭಿನ್ನ ಶಕ್ತಿ ಹುಟ್ಟಿದಳು. ಆ ನಿರ್ಭಿನ್ನಶಕ್ತಿಯ ನೆನಹುಮಾತ್ರದಲ್ಲಿ ನಿಭ್ರಾಂತಶಕ್ತಿ ಹುಟ್ಟಿದಳು. ಆ ನಿಭ್ರಾಂತಶಕ್ತಿಯ ನೆನಹುಮಾತ್ರದಲ್ಲಿ ನಿರ್ಮಾಯಶಕ್ತಿ ಹುಟ್ಟಿದಳು. ಆ ನಿರ್ಮಾಯಶಕ್ತಿಯ ನೆನಹುಮಾತ್ರದಲ್ಲಿ ಹಾಕಿನಿಶಕ್ತಿ ಹುಟ್ಟಿದಳು. ಆ ಹಾಕಿನಿಶಕ್ತಿಯ ನೆನಹುಮಾತ್ರದಲ್ಲಿ ಡಾಕಿನಿಶಕ್ತಿ ಹುಟ್ಟಿದಳು. ಆ ಡಾಕಿನಿಶಕ್ತಿಯ ನೆನಹುಮಾತ್ರದಲ್ಲಿ ಶಾಕಿನಿಶಕ್ತಿ ಹುಟ್ಟಿದಳು. ಆ ಶಾಕಿನಿಶಕ್ತಿಯ ನೆನಹುಮಾತ್ರದಲ್ಲಿ ಲಾಕಿನಿಶಕ್ತಿ ಹುಟ್ಟಿದಳು. ಆ ಲಾಕಿನಿಶಕ್ತಿಯ ನೆನಹುಮಾತ್ರದಲ್ಲಿ ರಾಕಿನಿಶಕ್ತಿ ಹುಟ್ಟಿದಳು. ಆ ರಾಕಿನಿಶಕ್ತಿಯ ನೆನಹುಮಾತ್ರದಲ್ಲಿ ಕಾಕಿನಿಶಕ್ತಿ ಹುಟ್ಟಿದಳು ನೋಡಾ. ಇದಕ್ಕೆ ನಿರಾಮಯಾತೀತಾಗಮೇ: ನಿರಂಜನ್ಯ ಮನೋಜ್ಞಾನಾನ್ನಿರ್ಭಿನ್ನಶ್ಚ ಸಮುದ್ಭವಃ | ನಿರ್ಭಿನ್ನಸ್ಯ ಮನೋಜ್ಞಾನಾನ್ನಿಭ್ರಾಂತಶಕ್ತಿರುದ್ಭವಾ || ನಿಭ್ರಾಂತ ಮನೋಜ್ಞಾನಾನ್ನಿರ್ಮಾಯಂ ಚ ಸಮುದ್ಭವಂ | ನಿರ್ಮಾಯಸ್ಯ ಮನೋಜ್ಞಾನಾತ್ ಹಾಕಿನೀಶಕ್ತಿರುದ್ಭವಾ || ಹಾಕಿನೇಶ್ಚ ಮನೋಜ್ಞಾನಾತ್ ಡಾಕಿನಿಶ್ಚ ಸಮುದ್ಭವಾ | ಡಾಕಿನೇಶ್ಚ ಮನೋ ಜ್ಞಾನಾತ್ ಶಾಕಿನಿಶ್ಚ ಸಮುದ್ಭವಾ || ಶಾಕಿನೇಶ್ಚ ಮನೋ ಜ್ಞಾನಾತ್ ಲಾಕಿನಿಶ್ಚ ಸಮುದ್ಭವಾ | ಲಾಕಿನೇಶ್ಚ ಮನೋ ಜ್ಞಾನಾತ್ ರಾಕಿನಿಶ್ಚ ಸಮುದ್ಬವಾ || ರಾಕಿನೇಶ್ಚ ಮನೋ ಜ್ಞಾನಾತ್ ಕಾಕಿನಿಶ್ಚ ಸಮುದ್ಭವಾ | ಏಕೈಕಂ ಪ್ರಾಣಮಾಖ್ಯಾತಂ ಏಕೈಕಂತು ಸಮನ್ವಿತಂ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.